ಎಲ್ಲ ಮಾಯ ಜಗತ್ತು ಮೊಬೈಲಮಯ...
ಎಲ್ಲ ಮಾಯ ಜಗತ್ತು ಮೊಬೈಲಮಯ
ಎಲ್ಲ ಮಾಯ ಜಗತ್ತು ಮೊಬೈಲಮಯ
ನಾವು ಮಾಯ... ನೀವು ಮಾಯ...
ಅಂದು ಅಜ್ಜಿ ಚಂದ್ರನ ನೋಡಿ ಕಥೆ ಹೇಳುವ ಕಾಲವೊಂದಿತ್ತು
ಇಂದು ಇನ್ಸ್ಟಾದಲ್ಲಿಯೇ ಸ್ಟೋರಿ ನೋಡುವ ಕಾಲವಾಗಿದೆ.
ಅಂದು ಪತ್ರ ಬರೆದು ಕಳುಹಿಸುವ ಕಾಲವೊಂದಿತ್ತು
ಇಂದು ಸೆಕೆಂಡ್ ನಲ್ಲೆ ಮೆಸೇಜ್ ಪೋಸ್ಟ್ ಮಾಡುವ ಕಾಲವಾಗಿದೆ.
ಅಂದು ಶಬ್ದಕೋಶ, ಪುಸ್ತಕ ಹುಡುಕುವ ಕಾಲವೊಂದಿತ್ತು
ಇಂದು ಕ್ಷಣಾರ್ಧದಲ್ಲಿ ಎಐ ಬಳಸಿ ಖುಷಿ ಪಡುವ ಕಾಲವಾಗಿದೆ.
ಅಂದು ಸಂಬಂಧಿಕರು ಮನೆಗೆ ಬಂದಾಗ ಕುಳಿತು ಮಾತನಾಡುವ ಕಾಲವೊಂದಿತ್ತು
ಇಂದು ರೀಲ್ಸ್ ನೋಡುತ್ತ ಸಂಬಂಧ ಮರೆಯುವ ಕಾಲವಾಗಿದೆ.
ಅಂದು ಸಮಾಜದಲ್ಲಿ ಒಳ್ಳೆಯತನದಿಂದ ಸ್ಟೇಟಸ್ ಹೆಚ್ಚಿಸುವ ಕಾಲವೊಂದಿತ್ತು
ಇಂದು ವಾಟ್ಸಾಪ್ ಸ್ಟೇಟಸ್ ಹಾಕಿ ಸ್ಟೇಟಸ್ ತೋರಿಸುವ ಕಾಲವಾಗಿದೆ.
ಅಂದು ದೀರ್ಘ ನಾಟ್ಯ, ನಾಟಕಗಳ ಮಾಡುವ ಕಾಲದಲ್ಲಿ ಇಂದು ಒಂದು ನಿಮಿಷದ ರೀಲ್ಸ್ ಮಾಡಿ ಕಮೆಂಟ್, ಲೈಕ್ ಪಡೆಯುವ ಕಾಲವಾಗಿದೆ.
ಅಂದು ಚಿನ್ನಿ ದಾಂಡು, ಲಗೋರಿ ಆಡುವ ಕಾಲವೊಂದಿತ್ತು ಇಂದು ಮೊಬೈಲ್ನಲ್ಲೆ ಗೇಮಿಂಗ್ ಆಡಿ ಜೀವಕ್ಕೆ ಕುತ್ತು ತಂದುಕೊಳ್ಳುವ ಕಾಲವಾಗಿದೆ .
ಅಂದು ಸಮಾಜದಲ್ಲಿ ಎಲ್ಲರೂ ಅನೂನ್ಯವಾಗಿ ಬೆರೆಯುವ ಕಾಲವೊಂದಿತ್ತು ಇಂದು ಸೋಶಿಯಲ್ ಮಿಡಿಯಾದಲ್ಲಿಯೇ ಮುಳುಗುವ ಕಾಲವಾಗಿದೆ.
ಅಂದು ಇತರರ ಹುಟ್ಟು, ಸಾವು, ಸುಖ, ದುಃಖಗಳಲ್ಲಿ ಬೆರೆತು ಭಾವನೆಗೆ ಸ್ಪಂದಿಸುವ ಕಾಲವಾಗಿತ್ತು. ಇಂದು ಎಲ್ಲವನ್ನು ಕೇವಲವಾಗಿ ತಿಳಿದಿರುವ ಕಾಲವಾಗಿದೆ.
ಅಂದು ಸಮಾಜದ ಸ್ವಾಸ್ಥ್ಯ ಕಾಯುವ ಕಾಲವೊಂದಿತ್ತು ಇಂದು ಸೈಬರ್ ಅಪರಾಧ ಮೂಲಕ ಮೊಸ ಹೋಗುವ ಕಾಲವಾಗಿದೆ.
ಅಂದು ಹಗಲಿರುಳು ಮೈಬಗ್ಗಿಸಿ ದುಡಿಯುವ ಕಾಲವೊಂದಿತ್ತು ಇಂದು ಯೂಟ್ಯೂಬ್ ರೀಲ್ಸ್ ಮಾಡಿ ಸಬ್ಸ್ಕ್ರೈಬ್ ಗಾಗಿ ಹಾತೊರೆಯುವ ಕಾಲವಾಗಿದೆ.
ಅಂದು ಜೀವನದ ಸಾಧನೆ ಮೆಚ್ಚಿ ಊರೇ ಮಾತಾಡುವಂತಿತ್ತು. ಇಂದು ನಮ್ಮ ಸಾಧನೆ ತಿಳಿಯಲು ನಮ್ಮ ಫೇಸ್ಬುಕ್ ಪೋಸ್ಟ್ ನೋಡಿ ತಾನೆ ಹೊಗಳಿಕೊಳ್ಳುವ ಕಾಲವಾಗಿದೆ.
ಇಂದು ಸ್ವತಃ ಮನೋಸ್ಪಂದನಕಾರನೇ ಮೊಬೈಲ್ ಅತಿಯಾಗಿ ಬಳಸಿ ಎಲ್ಲ ಮಾಯ ಎಣಿಸಿದಾಗ ರಚಿತ ಇದು ಎಲ್ಲ ಮಾಯ ಜಗತ್ತು ಮೊಬೈಲಮಯವಾಗಿದೆ
ಎಲ್ಲ ಮಾಯ ಜಗತ್ತು ಮೊಬೈಲಮಯ
ನಾವು ಮಾಯ... ನೀವು ಮಾಯ...
ಬೈರಪ್ಪ ಹಾಲಪ್ಪಗೋಳ, ಸಂಶೋಧನಾರ್ಥಿ, ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
Comments
Post a Comment