Posts

Showing posts from March, 2026

ಎಲ್ಲ ಮಾಯ ಜಗತ್ತು ಮೊಬೈಲಮಯ...

Image
ಎಲ್ಲ ಮಾಯ ಜಗತ್ತು ಮೊಬೈಲಮಯ ಎಲ್ಲ ಮಾಯ ಜಗತ್ತು ಮೊಬೈಲಮಯ ನಾವು ಮಾಯ... ನೀವು ಮಾಯ...  ಅಂದು ಅಜ್ಜಿ ಚಂದ್ರನ ನೋಡಿ ಕಥೆ ಹೇಳುವ ಕಾಲವೊಂದಿತ್ತು ಇಂದು ಇನ್ಸ್ಟಾದಲ್ಲಿಯೇ  ಸ್ಟೋರಿ ನೋಡುವ ಕಾಲವಾಗಿದೆ. ಅಂದು ಪತ್ರ ಬರೆದು ಕಳುಹಿಸುವ ಕಾಲವೊಂದಿತ್ತು ಇಂದು ಸೆಕೆಂಡ್ ನಲ್ಲೆ ಮೆಸೇಜ್ ಪೋಸ್ಟ್ ಮಾಡುವ ಕಾಲವಾಗಿದೆ. ಅಂದು ಶಬ್ದಕೋಶ, ಪುಸ್ತಕ ಹುಡುಕುವ ಕಾಲವೊಂದಿತ್ತು ಇಂದು ಕ್ಷಣಾರ್ಧದಲ್ಲಿ ಎಐ ಬಳಸಿ ಖುಷಿ ಪಡುವ ಕಾಲವಾಗಿದೆ. ಅಂದು ಸಂಬಂಧಿಕರು ಮನೆಗೆ ಬಂದಾಗ  ಕುಳಿತು ಮಾತನಾಡುವ ಕಾಲವೊಂದಿತ್ತು  ಇಂದು ರೀಲ್ಸ್ ನೋಡುತ್ತ ಸಂಬಂಧ ಮರೆಯುವ ಕಾಲವಾಗಿದೆ. ಅಂದು ಸಮಾಜದಲ್ಲಿ ಒಳ್ಳೆಯತನದಿಂದ ಸ್ಟೇಟಸ್ ಹೆಚ್ಚಿಸುವ  ಕಾಲವೊಂದಿತ್ತು ಇಂದು ವಾಟ್ಸಾಪ್ ಸ್ಟೇಟಸ್ ಹಾಕಿ ಸ್ಟೇಟಸ್ ತೋರಿಸುವ ಕಾಲವಾಗಿದೆ.  ಅಂದು ದೀರ್ಘ ನಾಟ್ಯ, ನಾಟಕಗಳ ಮಾಡುವ ಕಾಲದಲ್ಲಿ ಇಂದು ಒಂದು ನಿಮಿಷದ ರೀಲ್ಸ್ ಮಾಡಿ ಕಮೆಂಟ್, ಲೈಕ್ ಪಡೆಯುವ ಕಾಲವಾಗಿದೆ. ಅಂದು ಚಿನ್ನಿ ದಾಂಡು, ಲಗೋರಿ ಆಡುವ ಕಾಲವೊಂದಿತ್ತು ಇಂದು ಮೊಬೈಲ್ನಲ್ಲೆ ಗೇಮಿಂಗ್ ಆಡಿ ಜೀವಕ್ಕೆ ಕುತ್ತು ತಂದುಕೊಳ್ಳುವ ಕಾಲವಾಗಿದೆ . ಅಂದು ಸಮಾಜದಲ್ಲಿ ಎಲ್ಲರೂ ಅನೂನ್ಯವಾಗಿ ಬೆರೆಯುವ ಕಾಲವೊಂದಿತ್ತು ಇಂದು ಸೋಶಿಯಲ್ ಮಿಡಿಯಾದಲ್ಲಿಯೇ ಮುಳುಗುವ   ಕಾಲವಾಗಿದೆ.  ಅಂದು ಇತರರ ಹುಟ್ಟು, ಸಾವು, ಸುಖ, ದುಃಖಗಳಲ್ಲಿ ಬೆರೆತು ಭಾವನೆಗೆ ಸ್ಪಂದಿಸುವ ಕಾಲವಾಗ...

ಸಮಾಜಕಾರ್ಯದಲ್ಲೂ ಇದೆ ಉನ್ನತ ಶಿಕ್ಷಣ : ಉದ್ಯೋಗಾವಕಾಶಗಳಲ್ಲಿ ಹೆಚ್ಚಳ, ಎಮ್. ಎಸ್. ಡಬ್ಲ್ಯೂ ಕೋರ್ಸಗೆ ಬಹುಬೇಡಿಕೆ!

Image
ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ.  ಕಲಾ ವಿಭಾಗದ ಕೋರ್ಸಗಳಲ್ಲಿಯೇ  ಅತ್ಯಂತ ಬೇಡಿಕೆ ಹೊಂದಿರುವ ಎಮ್ ಎಸ್ ಡಬ್ಲ್ಯೂ (ಸ್ನಾತಕೋತ್ತರ ಸಮಾಜ ಕಾರ್ಯ) ವಿಶಿಷ್ಟ ಅಧ್ಯಯನ ಮತ್ತು ತನ್ನದೇ ಆದ ಕಾರ್ಯಕ್ಷೇತ್ರವನ್ನು ಹೊಂದಿದೆ. ಕೋರ್ಸ ನ ಅವಧಿ ಪೂರ್ಣಗೊಳ್ಳುವವರೆಗೆ ಹಲವಾರು ಸಂಸ್ಥೆಗಳು, ಕಂಪೆನಿಗಳು, ಆಸ್ಪತ್ರೆ, ಕೈಗಾರಿಕೆ ಸೇರಿ ಕ್ಷೇತ್ರಕಾರ್ಯ ಅಭ್ಯಾಸ ಮಾಡುವ ವಿದ್ಯಾರ್ಥಿಗಳು. ತಮ್ಮ ಕಾರ್ಯ ನೈಪುಣ್ಯತೆ ಮತ್ತು ಕೌಶಲ್ಯಗಳಿಂದ ನಾಲ್ಕನೇ ಸೆಮಿಸ್ಟರ್ ಪೂರ್ಣಗೊಳಿಸುವ ಮುಂಚಿತವಾಗಿಯೇ ಉದ್ಯೋಗಾವಕಾಶ ಹೊಂದಿರುತ್ತಾರೆ ಎಂಬುದು ಈ ಕೋರ್ಸ್ ನ ವೈಶಿಷ್ಟ್ಯವಾಗಿದೆ. ಎಮ್ ಎಸ್ ಡಬ್ಲ್ಯೂ ಕೋರ್ಸ ಬಗ್ಗೆ ಮೊದಲ ಬಾರಿಗೆ ಕೇಳಿರುವವರಲ್ಲಿ ಗೊಂದಲ ಇರಬಹುದು . ಆದರೆ ಒಮ್ಮೆ ಈ ಕೋರ್ಸ್ ಸೇರುವವರ ಭವಿಷ್ಯ ಮಾತ್ರ ಉಜ್ವಲವಾಗಿದೆ. ಸಮಾಜ ಕಾರ್ಯವು ಒಂದು ವೃತ್ತಿಪರ ಕೋರ್ಸ್ ಆಗಿದ್ದು, ಇದು ಸಂತೋಷದಾಯಕ, ಆಸಕ್ತಿದಾಯಕ ಕಲಿಕೆಗೆ, ನಾಯಕತ್ವ, ವ್ಯಕ್ತಿತ್ವ ಬೆಳವಣಿಗೆಗೆ, ಮಾದರಿ ಪ್ರಜೆಯಾಗಿ ರೂಪುಗೊಳ್ಳಲು ಈ ಕೋರ್ಸ್ ಸಹಾಯಕವಾಗಿದೆ. ವಿಜ್ಞಾನ ವಿಷಯಗಳಲ್ಲಿ ಪ್ರಯೋಗಾಲಯದಲ್ಲಿ ಪ್ರಯೋಗದ ಮೂಲಕ ಅನುಭವ ಪಡೆದರೆ ಇಲ್ಲಿ ಇಡಿ ಸಮಾಜಕಾರ್ಯಕರ್ತರಿಗೆ ಇಡಿ ಸಮುದಾಯವೇ ಪ್ರಯೋಗಾಲಯವಾಗಿದೆ.ವರ್ಗದಲ್ಲಿ ಕಲಿತ ಥಿಯರಿ ವಿಷಯಗಳನ್ನು ಸಮುದಾಯದಲ್ಲಿ ಆಚರಣೆಗೆ ತರಲಾಗುತ್ತದೆ. ಸಮಾಜಕಾರ್ಯವು ಒಂದ...