ಎಲ್ಲ ಮಾಯ ಜಗತ್ತು ಮೊಬೈಲಮಯ...
ಎಲ್ಲ ಮಾಯ ಜಗತ್ತು ಮೊಬೈಲಮಯ ಎಲ್ಲ ಮಾಯ ಜಗತ್ತು ಮೊಬೈಲಮಯ ನಾವು ಮಾಯ... ನೀವು ಮಾಯ... ಅಂದು ಅಜ್ಜಿ ಚಂದ್ರನ ನೋಡಿ ಕಥೆ ಹೇಳುವ ಕಾಲವೊಂದಿತ್ತು ಇಂದು ಇನ್ಸ್ಟಾದಲ್ಲಿಯೇ ಸ್ಟೋರಿ ನೋಡುವ ಕಾಲವಾಗಿದೆ. ಅಂದು ಪತ್ರ ಬರೆದು ಕಳುಹಿಸುವ ಕಾಲವೊಂದಿತ್ತು ಇಂದು ಸೆಕೆಂಡ್ ನಲ್ಲೆ ಮೆಸೇಜ್ ಪೋಸ್ಟ್ ಮಾಡುವ ಕಾಲವಾಗಿದೆ. ಅಂದು ಶಬ್ದಕೋಶ, ಪುಸ್ತಕ ಹುಡುಕುವ ಕಾಲವೊಂದಿತ್ತು ಇಂದು ಕ್ಷಣಾರ್ಧದಲ್ಲಿ ಎಐ ಬಳಸಿ ಖುಷಿ ಪಡುವ ಕಾಲವಾಗಿದೆ. ಅಂದು ಸಂಬಂಧಿಕರು ಮನೆಗೆ ಬಂದಾಗ ಕುಳಿತು ಮಾತನಾಡುವ ಕಾಲವೊಂದಿತ್ತು ಇಂದು ರೀಲ್ಸ್ ನೋಡುತ್ತ ಸಂಬಂಧ ಮರೆಯುವ ಕಾಲವಾಗಿದೆ. ಅಂದು ಸಮಾಜದಲ್ಲಿ ಒಳ್ಳೆಯತನದಿಂದ ಸ್ಟೇಟಸ್ ಹೆಚ್ಚಿಸುವ ಕಾಲವೊಂದಿತ್ತು ಇಂದು ವಾಟ್ಸಾಪ್ ಸ್ಟೇಟಸ್ ಹಾಕಿ ಸ್ಟೇಟಸ್ ತೋರಿಸುವ ಕಾಲವಾಗಿದೆ. ಅಂದು ದೀರ್ಘ ನಾಟ್ಯ, ನಾಟಕಗಳ ಮಾಡುವ ಕಾಲದಲ್ಲಿ ಇಂದು ಒಂದು ನಿಮಿಷದ ರೀಲ್ಸ್ ಮಾಡಿ ಕಮೆಂಟ್, ಲೈಕ್ ಪಡೆಯುವ ಕಾಲವಾಗಿದೆ. ಅಂದು ಚಿನ್ನಿ ದಾಂಡು, ಲಗೋರಿ ಆಡುವ ಕಾಲವೊಂದಿತ್ತು ಇಂದು ಮೊಬೈಲ್ನಲ್ಲೆ ಗೇಮಿಂಗ್ ಆಡಿ ಜೀವಕ್ಕೆ ಕುತ್ತು ತಂದುಕೊಳ್ಳುವ ಕಾಲವಾಗಿದೆ . ಅಂದು ಸಮಾಜದಲ್ಲಿ ಎಲ್ಲರೂ ಅನೂನ್ಯವಾಗಿ ಬೆರೆಯುವ ಕಾಲವೊಂದಿತ್ತು ಇಂದು ಸೋಶಿಯಲ್ ಮಿಡಿಯಾದಲ್ಲಿಯೇ ಮುಳುಗುವ ಕಾಲವಾಗಿದೆ. ಅಂದು ಇತರರ ಹುಟ್ಟು, ಸಾವು, ಸುಖ, ದುಃಖಗಳಲ್ಲಿ ಬೆರೆತು ಭಾವನೆಗೆ ಸ್ಪಂದಿಸುವ ಕಾಲವಾಗ...